ಬ್ಯಾಂಕ್ ಗ್ರಾಹಕರ ಗಮನಕ್ಕೆ: ಜ.24 ರಿಂದ 27 ರವರೆಗೆ ಸತತ 4 ದಿನ ಬ್ಯಾಂಕ್ಗಳಿಗೆ ಬೀಗ!
ನೀವೇನಾದರೂ ಬ್ಯಾಂಕ್ನಲ್ಲಿ ಕೆಲಸ ಇಟ್ಟುಕೊಂಡಿದ್ದೀರಾ? ಅಥವಾ ಹಣ ಡ್ರಾ ಮಾಡಬೇಕೆಂದಿದ್ದೀರಾ? ಹಾಗಿದ್ದರೆ ಈ ಸುದ್ದಿಯನ್ನು ತಪ್ಪದೇ ಓದಿ. ನಾಳೆಯಿಂದ ಸತತ ನಾಲ್ಕು ದಿನಗಳ ಕಾಲ ಕರ್ನಾಟಕ ಸೇರಿದಂತೆ ದೇಶಾದ್ಯಂತ ಬ್ಯಾಂಕ್ ಸೇವೆಗಳು ಲಭ್ಯವಿರುವುದಿಲ್ಲ. ವಾರಾಂತ್ಯದ ರಜೆ, ಸರ್ಕಾರಿ ರಜೆ ಮತ್ತು ನೌಕರರ ಮುಷ್ಕರದಿಂದಾಗಿ ಈ ಸ್ಥಿತಿ ಎದುರಾಗಿದೆ.
ರಜೆಗಳ ಪಟ್ಟಿ ಹೀಗಿದೆ:
ಬ್ಯಾಂಕ್ಗಳು ಯಾಕೆ ಮತ್ತು ಯಾವತ್ತು ರಜೆ ಇರುತ್ತವೆ ಎಂಬ ವಿವರ ಇಲ್ಲಿದೆ:
-
ಜನವರಿ 24 (4ನೇ ಶನಿವಾರ): ಬ್ಯಾಂಕ್ಗಳಿಗೆ ಅಧಿಕೃತ ರಜೆ.
-
ಜನವರಿ 25 (ಭಾನುವಾರ): ವಾರದ ರಜೆ.
-
ಜನವರಿ 26 (ಸೋಮವಾರ): ಗಣರಾಜ್ಯೋತ್ಸವದ ಪ್ರಯುಕ್ತ ಸಾರ್ವತ್ರಿಕ ರಜೆ.
-
ಜನವರಿ 27 (ಮಂಗಳವಾರ): ಬ್ಯಾಂಕ್ ನೌಕರರ ಸಂಘದಿಂದ ದೇಶವ್ಯಾಪಿ ಮುಷ್ಕರ.
ಮುಷ್ಕರಕ್ಕೆ ಕಾರಣವೇನು?
ಬ್ಯಾಂಕ್ ನೌಕರರು ದೀರ್ಘಕಾಲದಿಂದ “ವಾರಕ್ಕೆ 5 ದಿನಗಳ ಕೆಲಸ” (5 Days Banking) ವ್ಯವಸ್ಥೆಗಾಗಿ ಆಗ್ರಹಿಸುತ್ತಿದ್ದಾರೆ. ಆರ್ಬಿಐ ಮತ್ತು ಎಲ್ಐಸಿಯಲ್ಲಿರುವಂತೆ ಶನಿವಾರ ಮತ್ತು ಭಾನುವಾರ ಪೂರ್ಣ ರಜೆ ನೀಡಬೇಕೆಂದು ಒತ್ತಾಯಿಸಿ ಜ. 27 ರಂದು ಪ್ರತಿಭಟನೆಗೆ ಕರೆ ನೀಡಲಾಗಿದೆ.
ಎಟಿಎಂ ಮತ್ತು ಆನ್ಲೈನ್ ಸೇವೆ:
ಸತತ ರಜೆ ಇರುವುದರಿಂದ ಎಟಿಎಂಗಳಲ್ಲಿ ಹಣ ಖಾಲಿಯಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಅಗತ್ಯವಿರುವ ನಗದನ್ನು ಇಂದೇ ಡ್ರಾ ಮಾಡಿಕೊಳ್ಳುವುದು ಉತ್ತಮ. ಆದರೆ, ಮೊಬೈಲ್ ಬ್ಯಾಂಕಿಂಗ್, ನೆಟ್ ಬ್ಯಾಂಕಿಂಗ್ ಮತ್ತು UPI (PhonePe, Google Pay) ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.